ಇನ್ನೊಂದು ವರುಷ ಉರುಳಿದೆ
ಕಾಲನ ತೆಕ್ಕೆಯೊಳಗೆ ಯಾರ ಅಂಕೆಗೂ ಸಿಗದೆ
ಎಷ್ಟು ಎಣಿಸುವೆನೆಂದರು ಯಾವ ಸಂಖ್ಯೆಗೂ ಎಟುಕದೆ
ಎಲ್ಲ ಅವಿತಿಹುದಿಲ್ಲಿ ನಮ್ಮ ನೆನಪಿನಂಗಳದಲ್ಲಿ
ಅವು ಇನ್ನೆಷ್ಟು ಆಸೆ-ಆಶೋತ್ತರಗಳೋ
ಸೇರ ಬಲ್ಲವೇ ಗುರಿಯ ಅರಿತವರು ಯಾರಿಲ್ಲಿ
ಮೂಕ ಹಕ್ಕಿಯ ಗತ ವೈಭವದ ಹಾಡು
ಹಿಡಿದು ಬದುಕ ಹಾದಿಯ ಜಾಡು
ಹೊರಟ ಸಂಭ್ರಮದ ನೆನಪು ಕೊನೆಗೆ ಸೇರಿದ್ದೆಲ್ಲಿಗೆ
ಮತ್ತೊಂದು ಹೊಸ ವರ್ಷ
ಮನದಾಳದಲ್ಲಿ ಮತ್ತಷ್ಟೇ ಹರುಷ
ಎಲ್ಲ ತರ್ಕದ ಸರಕ ಹೊತ್ತು ಹೊರಟಿಹೆವಿಲ್ಲಿ
ಯಾರು ನಗುವರೋ ಇಲ್ಲಿ
ಇನ್ಯಾರು ಅಳುವರೋ ನರಳಿ
ಹೇಳ ಬಲ್ಲಿರೇನು ನೀವು ಇಲ್ಲಿ
ಏನು ಘಟಿಸಿದರೇನು, ಎಷ್ಟು ಹರಸಿದರೇನು
ಅತ್ತು ತಡೆದರೆ ಕಾಲ ಹಿಂತಿರುಗಿ
ಮರಳುವುದೇನು ಇಲ್ಲಿ
ತಡೆದು ನಿಲ್ಲಿಸಿ ನಿನ್ನ ಹೋಗದಿರು
ಮುಂದೆಂದೂ ನಿಲ್ಲಿಸುವ ಗೈರತ್ತು
ಯಾರಿಗಿದೆ ಇಲ್ಲಿ
ಯಾವುದೇನೆ ಇರಲಿ, ಗಾಳಿ ಹೇಗೇ ಬರಲಿ
ಯಾರ ಮೊಗದಲೂ ನಗುವ ಸೆಲೆ
ತಾ ಬತ್ತದಿರಲಿ
ಎಲ್ಲಾ ನಕ್ಕ ನಗುವ ಸದ್ದು ಸ್ವರ್ಗಕ್ಕೆ
ಕಿಚ್ಚು ಹಚ್ಚಿದಂತಿರಲಿ, ಆ ಕಿಚ್ಚ ಬೇಗೆಯಲಿ
ದೇವಾನುದೇವತೆಗಳು ಬೆವತು ಬಿಡಲಿ
ನನ್ನವರಿಗೆಲ್ಲಾ ಹೊಸವರುಷ
ಹೊಸತನವ ಹೊತ್ತು ತರಲಿ
ನಿಮ್ಮ ಮೊಗದಲ್ಲೆಂದು ನಗುವೇ
ರಾರಾಜಿಸಲಿ...
(ನನ್ನ ಮನದಂಗಳದ ಅತಿಥಿಗಳಿಗೆಲ್ಲಾ ಹೊಸ ವರುಷದ ಹಾರ್ಧಿಕ ಶುಭಾಶಯಗಳು)
ಕಾಲನ ತೆಕ್ಕೆಯೊಳಗೆ ಯಾರ ಅಂಕೆಗೂ ಸಿಗದೆ
ಎಷ್ಟು ಎಣಿಸುವೆನೆಂದರು ಯಾವ ಸಂಖ್ಯೆಗೂ ಎಟುಕದೆ
ಎಲ್ಲ ಅವಿತಿಹುದಿಲ್ಲಿ ನಮ್ಮ ನೆನಪಿನಂಗಳದಲ್ಲಿ
ಅವು ಇನ್ನೆಷ್ಟು ಆಸೆ-ಆಶೋತ್ತರಗಳೋ
ಸೇರ ಬಲ್ಲವೇ ಗುರಿಯ ಅರಿತವರು ಯಾರಿಲ್ಲಿ
ಮೂಕ ಹಕ್ಕಿಯ ಗತ ವೈಭವದ ಹಾಡು
ಹಿಡಿದು ಬದುಕ ಹಾದಿಯ ಜಾಡು
ಹೊರಟ ಸಂಭ್ರಮದ ನೆನಪು ಕೊನೆಗೆ ಸೇರಿದ್ದೆಲ್ಲಿಗೆ
ಮತ್ತೊಂದು ಹೊಸ ವರ್ಷ
ಮನದಾಳದಲ್ಲಿ ಮತ್ತಷ್ಟೇ ಹರುಷ
ಎಲ್ಲ ತರ್ಕದ ಸರಕ ಹೊತ್ತು ಹೊರಟಿಹೆವಿಲ್ಲಿ
ಯಾರು ನಗುವರೋ ಇಲ್ಲಿ
ಇನ್ಯಾರು ಅಳುವರೋ ನರಳಿ
ಹೇಳ ಬಲ್ಲಿರೇನು ನೀವು ಇಲ್ಲಿ
ಏನು ಘಟಿಸಿದರೇನು, ಎಷ್ಟು ಹರಸಿದರೇನು
ಅತ್ತು ತಡೆದರೆ ಕಾಲ ಹಿಂತಿರುಗಿ
ಮರಳುವುದೇನು ಇಲ್ಲಿ
ತಡೆದು ನಿಲ್ಲಿಸಿ ನಿನ್ನ ಹೋಗದಿರು
ಮುಂದೆಂದೂ ನಿಲ್ಲಿಸುವ ಗೈರತ್ತು
ಯಾರಿಗಿದೆ ಇಲ್ಲಿ
ಯಾವುದೇನೆ ಇರಲಿ, ಗಾಳಿ ಹೇಗೇ ಬರಲಿ
ಯಾರ ಮೊಗದಲೂ ನಗುವ ಸೆಲೆ
ತಾ ಬತ್ತದಿರಲಿ
ಎಲ್ಲಾ ನಕ್ಕ ನಗುವ ಸದ್ದು ಸ್ವರ್ಗಕ್ಕೆ
ಕಿಚ್ಚು ಹಚ್ಚಿದಂತಿರಲಿ, ಆ ಕಿಚ್ಚ ಬೇಗೆಯಲಿ
ದೇವಾನುದೇವತೆಗಳು ಬೆವತು ಬಿಡಲಿ
ನನ್ನವರಿಗೆಲ್ಲಾ ಹೊಸವರುಷ
ಹೊಸತನವ ಹೊತ್ತು ತರಲಿ
ನಿಮ್ಮ ಮೊಗದಲ್ಲೆಂದು ನಗುವೇ
ರಾರಾಜಿಸಲಿ...
(ನನ್ನ ಮನದಂಗಳದ ಅತಿಥಿಗಳಿಗೆಲ್ಲಾ ಹೊಸ ವರುಷದ ಹಾರ್ಧಿಕ ಶುಭಾಶಯಗಳು)
11 ಕಾಮೆಂಟ್ಗಳು:
ನಿಮಗೂ..
ಹೊಸವರ್ಷ ..
ಹರ್ಷದಾಯಕವಾಗಿರಲಿ...
ನಿಮ್ಮೆಲ್ಲ..
ಆಸೆ,,, ಆಕಾಂಕ್ಷೆಗಳು ..
ಈಡೇರಲಿ...
ರಾಜೇಶ್,
ಕವನದ ಮೂಲಕ ಹೊಸ ವರ್ಷದ ಶುಭಾಶಯ ಹೇಳುತ್ತಿದ್ದೀರಿ..
ನಿಮಗೂ ಹೊಸ ವರ್ಷ
ಹರ್ಷದಾಯಕವಾಗಿರಲಿ...
Hosa varshada shubhaashayagalu....nice one
ತಮಗೂ ಹೊಸ ವರುಷದ ಶುಭಾಶಯಗಳು
-ತುಂಬುಪ್ರೀತಿ,
ಚಿತ್ರಾ
ಪ್ರಕಾಶ್ ಸರ್, ಶಿವೂ ಸರ್, ಉಷಕ್ಕ, ಹಾಗು ಚಿತ್ರಾ,
ನಿಮ್ಮೆಲ್ಲರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು. ನಿಮ್ಮ ಪ್ರೀತಿಗೆ ನಾನು ಋಣಿ.
-ರಾಜೇಶ್ ಮಂಜುನಾಥ್
hosavarushada bagge tumbane nirikshe ituu kondiddira. nimma nirikshene yellara nirikshe kuda yella nriksheyante nadeyali yendu harisutta hosa varushada shubhashayagalu
ಹೊಸ ವರ್ಷ ನಿಮ್ಮ ಬಾಳಿಗೆ ಬೆಳ್ದಿಂಗಳು ಬರಲಿ...
ನಿಮ್ಮ ಮನೆಯವರಿಗೆ ಹರುಷದ ಹೊನಲು ತರಲಿ...
ನಮಗೆ...?
ನಮಗೆ ಹೋಳಿಗೆಯೂಟ ಸಾಕು..;-)
ರೋಹಿಣಿ,
ನೀರಿಕ್ಷೆಗಳೆನೋ ಬೆಟ್ಟದಷ್ಟಿವೆ, ಆದರೆ ಕೈಗೆಟುಕುವವು ಕೆಲವು ಮಾತ್ರವಲ್ಲವೆ.. ಹಾರೈಕೆಗೆ ಧನ್ಯವಾದಗಳು, ನಿಮಗೆ ಹೊಸ ವರ್ಷ ತುಂಬಾ ಚೆನ್ನಾಗಿರಲಿ, ನಿಮ್ಮ ಸದಾಶಯಗಳೆಲ್ಲ ಈಡೇರಲಿ.
ರಂಜಿತ್,
ನನಗೆ ಬೆಳದಿಂಗಳು ಸರಿ, ಮನೆಯವರಿಗೆ ಹರುಷದ ಹೊನಲು ಸರಿ, ಆದರೆ ನಿಮಗೆ ನನ್ನ ಹೋಳಿಗೆ ಊಟಕ್ಕೆ ಏನು ಆತುರ :), ಬೇಕೇ ಬೇಕೆಂದರೆ ಸ್ವಲ್ಪ ಕಾಯಬೇಕು. ಆಗಲೇ ಅಮ್ಮ ಹಠಕ್ಕೆ ಬಿದ್ದಿದ್ದಾರೆ, ಸಮಾಧಾನಿಸಿ ಸೋತಿದ್ದೇನೆ ;)
-ರಾಜೇಶ್ ಮಂಜುನಾಥ್
ಶುಭಹಾರೈಕೆಯ ಕವನ ಚೆನ್ನಾಗಿದೆ;ಕಾಲದ ಬಗ್ಗೆ ಯಾರೇನೆ ಬರೆದರೂ ನನಗೆ ಶಿವರುದ್ರಪ್ಪನವರ 'ಮಬ್ಬಿನಿಂದ ಮಬ್ಬಿಗೆ' ಕವನ ನೆನಪಾಗುತ್ತದೆ, ಕಾಲವನ್ನು ಹಿಡಿದು ನಿಲ್ಲಿಸಲಾಗದ ಅಸಹಾಯಕತೆಯನ್ನು, ಮನಸ್ಸಿನ ಚಡಪಡಿಕೆಯನ್ನು ತುಂಬ ಚೆನ್ನಾಗಿ ಹೇಳಿದ್ದಾರೆ; ನಿಮ್ಮ ಸಾಲುಗಳೂ ಇಷ್ಟವಾದವು.
ಜೊತೆಗೆ ಗ್ರಿಷ್ಮಗಾನದ ಲಿಂಕ್ ನಿಮ್ಮ ಬ್ಲಾಗ್ ನಲ್ಲಿ ಕೊಟ್ಟಿದ್ದಕ್ಕೆ ಧನ್ಯವಾದಗಳೂ ಕೂಡ.
ಗ್ರೀಷ್ಮ ಗಾನದವರೇ,
ನನ್ನ ಮನದಂಗಳಕ್ಕೆ ಸುಸ್ವಾಗತ, ಮೆಚ್ಚುಗೆಗೆ ಧನ್ಯವಾದಗಳು.
ನಿಮ್ಮ ಬ್ಲಾಗ್ ಕೊಂಡಿ ನನ್ನ ಬ್ಲಾಗ್ ನಲ್ಲಿ ಹಾಕಿಕೊಳ್ಳಲು ಅನುಮತಿಸಿದ್ದಕ್ಕೆ ನಿಮಗೆ ನಾನು ಧನ್ಯವಾದ ಹೇಳಬೇಕು.
-ರಾಜೇಶ್ ಮಂಜುನಾಥ್
mast:)
ಕಾಮೆಂಟ್ ಪೋಸ್ಟ್ ಮಾಡಿ