ಶಿಶಿರನಾಗಮನದಿಂದ ಎಲೆಯುದುರಿ ನಿಂತಿದ್ದಕ್ಕೋ?
ವಸಂತನಾಗಮನದಿಂದ ಮೈತುಂಬಿ ಬಂದದ್ದಕ್ಕೋ?
ಕಾರಣವರಿಯೆನು!
ನಿರಾಕಾರಣವಾಗಿ...
ನಿರ್ವಿಕಾರಣವಾಗಿ... ನೀನು ನಿಂತು ತೂಗಿ...
ಇಷ್ಟಿಷ್ಟೇ ಎನುವಷ್ಟು ತಂಪೆಲರ ಸೂಸಿದಂತಿದೆ...
ಆ ತಂಗಾಳಿಯ ರಭಸಕ್ಕೆ ನಾನು ಸಿಲುಕಿ ನಲುಗಿದಂತಿದೆ!
ಮತ್ತೆ ಮತ್ತೆ ನಗುವ ಆಸೆ ಮನದಿ ಚಿಗುರಿದಂತಿದೆ!
ಆದರೇಕೋ ಪಾಪಿ ಮನಸು ಮತ್ತೇ ಸೋತು ಕುಳಿತಿದೆ...