ಸೋಮವಾರ, ಡಿಸೆಂಬರ್ 29, 2008

ಹತ್ಯೆ!

ಸತ್ತು ಮಲಗಿಹುದು ಹಲ್ಲಿ
ನಾ ರಾತ್ರಿಯಿಡೀ ಬರೆದ ಲೇಖನದ
ಹಾಳೆಗಳ ನಡುವಲ್ಲಿ...

ನನಗೇನೋ ಆತಂಕ ಹಾಗು ಜಿಜ್ಞಾಸೆ
ಆಗಿ ಹೋಯಿತೆ ಹತ್ಯೆ, ಆಗಿ ಹೋದೆನೇ ಹಂತಕ
ದುಗುಡ ಕಳವಳವೀಗ ಮನದಲ್ಲಿ...

ಆದರೆ ನನ್ನ ಲೇಖನವ ಓದಿ ಮನನೊಂದು
ಹಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂತಹುದು
ನಾನು ಬರೆದುದಾದರು ಏನಿಲ್ಲಿ!

8 ಕಾಮೆಂಟ್‌ಗಳು:

Ittigecement ಹೇಳಿದರು...

ರಾಜೆಶ್..ಮಂಜುನಾಥ್...

ಎಷ್ಟು ಚಂದವಾಗಿ ಬರೆದಿದ್ದೀರಿ..?

ಕಡಿಮೆ ಶಬ್ಧಗಳಲ್ಲಿ ಭಾವನೆ,, ಭಾವಾರ್ಥ ವ್ಯಕ್ತ ಪಡಿಸುವದು ಕಷ್ಟ..

ತುಂಬಾ ಚೆನ್ನಾಗಿದೆ..
ಚಿಕ್ಕವಾದರೂ ಚೊಕ್ಕವಾಗಿದೆ..

ನೋಡಿದಿರಾ..
ನನ್ನ ಪ್ರತಿಕ್ರಿಯೆ ನಿಮ್ಮ ಕವನಕ್ಕಿಂತ ದೊಡ್ಡದಾಗಿ ಬಿಟ್ಟಿತು..!

ಅಭಿನಂದನೆಗಳು..

shivu.k ಹೇಳಿದರು...

ರಾಜೇಶ್ ಮಂಜುನಾಥ್,
ಬಲು ಮಜವಾಗಿ ಬರೆಯುತ್ತೀರಿ...ನಿಮಗೆ ಪ್ರತಿಯೊಂದು ವಸ್ತುವು ಕತೆ ಮತ್ತು ಕವನಕ್ಕೆ ಆಹಾರವೇ ! ಕೊನೆಯ ಪಂಚ್ ಚೆನ್ನಾಗಿದೆ... ಮುಂದುವರಿಸಿ....

ಅನಾಮಧೇಯ ಹೇಳಿದರು...

:)
2009 ಶುಭಪ್ರದವಾಗಿರಲಿ...

ವಂದೇ,
ಚೇತನಾ ತೀರ್ಥಹಳ್ಳಿ

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ಅನಾರೋಗ್ಯದ ಕಾರಣದಿಂದ ಎಲ್ಲಾ ಪ್ರತಿಕ್ರಿಯೆಗೆ ಕೂಡಲೇ ಉತ್ತರಿಸಲು ಆಗಿರಲಿಲ್ಲ, ಕ್ಷಮೆ ಇರಲಿ.

ಪ್ರಕಾಶ್ ಸರ್,
ತುಂಬಾ ತುಂಬಾ ಧನ್ಯವಾದಗಳು, ಆದರೆ ನನ್ನ ಬರಹಗಳು ನಿಮ್ಮ ಬರಹಗಳಷ್ಟು ಮೊನಚಾಗಿರುವುದಿಲ್ಲ ಎಂಬ ಅಸೂಯೆ ನನಗಿದೆ. ನಿಮ್ಮ ಪ್ರತಿಕ್ರಿಯೆ ಎಷ್ಟು ದೊಡ್ಡದಿದ್ದರೂ ನನಗೆ ಸಂತಸವೇ. ಧನ್ಯವಾದಗಳ ಮಹಾಪೂರ ನಿಮಗೆ.

ಕೆನೆ ಕಾಫಿಯವರೇ,
ನಿಮ್ಮ ನಗು ಮತ್ತು ನೀವು ಇಲ್ಲಿ ಭೇಟಿ ನೀಡಿದ್ದು, ನನಗೆ ಕೆನೆ ಕಾಫಿಯನ್ನು ಗುಟುಕೇರಿಸಿದಂತೆ ಆಯಿತು, ಆಗಾಗ ಬಂದು ಹೋಗಿ, ನಿಮ್ಮ ಅಭಿಪ್ರಾಯವನ್ನು ಸಾಲುಗಳಲ್ಲಿ ಬಿಟ್ಟು ಹೋದರೆ ನನಗೆ ಇನ್ನು ಸಂತಸವಾಗುತ್ತದೆ.

ಶಿವೂ ಸರ್,
ನನ್ನವೆಲ್ಲ ಬಾಲಿಶ ಬರಹಗಳು, ನಿಮ್ಮ ಹಾಗು ಪ್ರಕಾಶ್ ಸರ್ ಬರಹದ ಆಳ ನನ್ನಲ್ಲಿ ಮೂಡುವುದೇ ಇಲ್ಲವೇನೋ ಎಂಬ ಆತಂಕವಿದೆ. ನನ್ನ ಮನದಂಗಳದೆಡೆಗೆ ನಿಮ್ಮ ಪ್ರೀತಿ ಹೀಗೆ ಮುಂದುವರಿಯಲಿ.

ಚೇತನರವರೆ,
ನಿಮ್ಮಂತಹವರು ನಾನು ಬರೆದಿದ್ದು ಓದುವುದೇ ನನಗೊಂದು ಹುಮ್ಮಸ್ಸು ನೀಡುತ್ತದೆ ಬರೆಯಲಿಕ್ಕೆ.
ನಿಮ್ಮ ಹಾರೈಕೆಗೆ ಧನ್ಯವಾದಗಳು.

ಪ್ರೀತಿಯಿಂದ
-ರಾಜೇಶ್ ಮಂಜುನಾಥ್

ಅನಾಮಧೇಯ ಹೇಳಿದರು...

Wow!! soooper.. .nice expression..

nijavaaglu halli satthittha?

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ಅರ್ಪಣ,
ಹಲ್ಲಿ ಸತ್ತಿದ್ದೇನೋ ನಿಜ, ಆದರೆ ನನ್ನ ಲೇಖನ ಓದಿ ಅಲ್ಲಾ ಅಂತ ನನ್ನ ಮನಸ್ಸು ಹೇಳ್ತಿದೆ, ಪಾಪಿ ಹಲ್ಲಿ ನನ್ನ ಹೆಸರು ಹಾಳು ಮಾಡಿದೆ ರೂಮ್ ನಲ್ಲಿ, ಏನು ತೊಂದರೆ ಇದ್ರೂ, ಇದು ಹೀಗೆ ಅಂತ ಒಂದು ಮಾತು ನನ್ನ ಹತ್ರ ಹೇಳ್ಕೋ ಬಹುದಿತ್ತು, ಹೀಗೆ ಸಾಯುವ ನಿರ್ಧಾರ ಯಾಕೆ ಮಾಡ್ತೋ, ಇಲ್ಲಿ ಗೆಳೆಯರು ನಾನೆ ಕಾರಣವೆಂಬಂತೆ ಮಾತನಾಡ್ತಾರೆ :).
ಹೀಗೆ ಬರ್ತಾ ಇರು... ಪ್ರೀತಿಯಿರಲಿ.
-ರಾಜೇಶ್

ಅನಾಮಧೇಯ ಹೇಳಿದರು...

ಲಾಸ್ಟ್ ಪ್ಯಾರ ಚೆನ್ನಾಗಿದೆ..
ಆದರೆ ನಂಗೆ ಹಲ್ಲಿ ಕಂಡರೆ ತುಂಬಾ ಭಯ ರಾಜೇಶ್ ಅವರೇ..

ಅನಾಮಧೇಯ ಹೇಳಿದರು...

ರಾಜೇಶ್
ಚೆನ್ನಾಗಿ ಬರೆದಿದ್ದೀರ ಓದಿ ನಕ್ಕು ಬಿಟ್ಟೆ ಪಾಪ ಆ ಹಲ್ಲಿ ಎನು ಪಾಪ ಮಡಿತ್ತೋ ನಿಮ್ಮ ಬರವಣಿಗೆ ಓದಲು ಅದನ್ನ ಓದಿ ಆತ್ಮ ಹತ್ಯೆನೆ ಮಡ್ಕೋತಲ್ರಿ ಹ ಹ ಹ
ನೋಡಿ ನಾನು ನಿಮ್ಮಿಂದ ಇಂತಹ ಬರಹ ಇನ್ನಷ್ಟು ಬರಲಿ ಅಂತ ಬೇಡ್ಕೋತೀನಿ