ನಾನಿವತ್ತು ಬೀಗ ಹಿಡಿದು ಕೊಂಡೆ ಬ್ಲಾಗಿನ ಕಡೆ ಬಂದಿದ್ದು, ನಾನಾಗಲೆ ತೀರ್ಮಾನಿಸಿಯಾಗಿತ್ತು ಇವತ್ತಿನಿಂದ ನನ್ನ ಈ ಬ್ಲಾಗಿಗೆ ದೊಡ್ಡದೊಂದು ಬೀಗ ಹಾಕಲೇ ಬೇಕು ಅಂತ. ಇದಕ್ಕೆ ಕಾರಣ ಹಲವು, ಅದರಲ್ಲಿ ಬಹು ಮುಖ್ಯವಾದದ್ದು ಬ್ಲಾಗರ್ ನ ಕೆಲವು ತಾಂತ್ರಿಕ ಲೋಪ-ದೋಷಗಳು ಮತ್ತೆ ಕೆಲವು ನ್ಯೂನ್ಯತೆಗಳು. ಈಗ ಹೊಸದೊಂದು ಬ್ಲಾಗಿನರಮನೆಯನ್ನು ಕಟ್ಟಿಕೊಂಡು ಅತ್ತ ವಲಸೆ ಹೊರಟಿದ್ದೇನೆ ಹೊರಟವನು ಈ ಮನೆಯ ನೆನಪಿನ ಬುತ್ತಿಯನ್ನು ಹೊತ್ತು ಹೊರಟಿದ್ದೇನೆ. ನನ್ನ ಬ್ಲಾಗಿಗೆ ವರುಷ ತುಂಬಿದ್ದಷ್ಟೇ ಅಲ್ವ, ಹಾಗಾಗಿ ಈಗ ಹೊಸ ಮನೆಗೆ ಕರೆದೊಯ್ಯುತ್ತಿದ್ದೇನೆ. ಮತ್ತೆ ಎಂದಿನಂತೆ ನೀವು ಜೊತೆಯಿರುತ್ತೀರಿ ಎಂಬ ವಿಶ್ವಾಸದಲ್ಲಿ, ನನ್ನ ಹೊಸ ಮನೆ ತೀರ ದೂರವೇನು ಇಲ್ಲ, ನಿಮ್ಮಿಂದ ಕೇವಲ ಇನ್ನೊಂದೇ ಕ್ಲಿಕ್ ನಷ್ಟು ದೂರದಲ್ಲಿದೆ. ಪ್ರೀತಿಯಿಂದ ಆಜ್ಞಾಪಿಸುತ್ತಿದ್ದೇನೆ ನೀವು ಬರಲೇ ಬೇಕು, ಬರಲಿಲ್ಲ ಅಂದ್ರೆ ನೋಡಿ ಮತ್ತೆ, ಚೆನ್ನಾಗಿರೋಲ್ಲ. ನಿಮ್ಮನ್ನು ಸ್ವಾಗತಿಸುವುದಕ್ಕೆ, ನಿಮ್ಮ ದಾರಿ ಕಾಯುತ್ತ ನನ್ನ ಹೊಸ ಮನೆಯ ಬಾಗಿಲಲ್ಲಿ ಕುಳಿತಿರುತ್ತೇನೆ.
ಉಫ್ ಎಂದು ಊದಿ ಬಿಡಿ
3 ವಾರಗಳ ಹಿಂದೆ