ಅಂತರಾಳ - ೨
ಅದು ಏಪ್ರಿಲ್ ತಿಂಗಳ ಕೊನೆಯ ವಾರ, ಮಲೆನಾಡಾದರು ಸಹ ಹೊರಗಡೆ ಸುಡು ಬಿಸಿಲು, ಇದರ ಜೊತೆ ಮನೆಯೊಳಗೆ ಜ್ವರದಿಂದ ನನ್ನ ಮೈ ವಿಪರೀತ ಸುಡುತ್ತಿತ್ತು, ಬೆಳಿಗ್ಗೆಯಿಂದ ಮನೆಯಲ್ಲಿ ಒಬ್ಬಂಟಿ, ನಾರು ಮತ್ತು ಹತ್ತಿ ಮಿಶ್ರಿತ ಹಾಸಿಗೆಯ ಮೇಲೆ ಚಡಪಡಿಸಿ, ಮಗ್ಗುಲು ಬದಲಿಸಿ ಮಲಗಿ, ಒಂದು ಪಾರ್ಶ್ವ ಪೂರ್ತಿ ಜಡ್ಡು ಹಿಡಿದಂತಾಗಿತ್ತು. ಪರೀಕ್ಷೆಗೆ ಕೆಲವೇ ದಿನಗಳು ಉಳಿದಿದ್ದು, ಒಂದೆಡೆ ಆತಂಕ ಇನ್ನೊಂದೆಡೆ ಪೂರ್ಣ ನಿತ್ರಾಣವಾಗಿಸಿದ್ದ ಜ್ವರ, ಬರಲಿದ್ದ ಎಲೆಕ್ಟ್ರಾನಿಕ್ಸ್ ಪರೀಕ್ಷೆಗೆ ಅಲ್ಲೇ ಪಕ್ಕದಲ್ಲಿದ್ದ ಪುಸ್ತಕ ಕೈಗೆತ್ತಿಕೊಂಡು ಒಂದೊಂದು ಸಾಲನ್ನು ಕಾದಂಬರಿ ಓದುವಂತೆ ಶ್ರದ್ದೆಯಿಂದ ಪಠಿಸತೊಡಗಿದೆ. ಅದಾವ ಮಾಯೆಯೋಳು ನಿದ್ರೆಗೆ ಶರಣಾಗಿದ್ದೆನೊ ಅರಿವೇ ಆಗಿರಲಿಲ್ಲ.
ಇದ್ದಕ್ಕಿದ್ದಂತೆ ಒಂದು ಕೈ ನನ್ನ ತಲೆ ನೇವರಿಸಿ, ಹಣೆಯ ಮೇಲೆ ಸ್ಥಾಪಿತವಾಗಿತ್ತು. ಆ ಬೆಚ್ಚನೆಯ ಸ್ಪರ್ಶದ ಹಿತಾನುಭವ ನನ್ನನ್ನು ನಿದ್ರಾ ಲೋಕದಿಂದ ಆಚೆಗೆ ಕರೆ ತಂದು ನಿಲ್ಲಿಸಿತ್ತು. ಕಣ್ತೆರೆದು ನೋಡಿದರೆ ಹಿತ ಸ್ಪರ್ಶ ನೀಡಿದಾಕೆಯ ಕಣ್ಣಲ್ಲಿ ಅಶ್ರುಧಾರೆ. ಗದ್ಗತಿತ ಮೆಲು ದನಿಯಲ್ಲಿ "ಏನೋ ಜ್ವರ ಇನ್ನು ಕಡಿಮೆಯಾಗಿಲ್ಲ, ನಾಡಿದ್ದೇ ಪರೀಕ್ಷೆ ನಿಂಗೆ" ಅಂತಷ್ಟೇ ಕೇಳಿ ನೇರ ಒಳ ಮನೆಗೆ ನಡೆದಳಾಕೆ. ನನ್ನ ಮನದಲ್ಲಿ 'ಒಂದು ಕ್ಷಣ ಈಕೆ ನನ್ನ ಜೊತೆ ಕುಳಿತು ಮಾತನಾಡುವುದ ಬಿಟ್ಟು, ಏನು ಅಷ್ಟೊಂದು ಆತುರದ ಕೆಲಸ ಮಾಡಲಿಕ್ಕೆ ಮನೆಯೊಳಗೆ ನಡೆದಳು' ಎಂಬ ಅಸಹನೆಯ ಅಲೆ.
ನನ್ನ ಮನಸ್ಸು ತಡೆಯಲೇ ಇಲ್ಲ, ಎರಡು ಬಾರಿ ಜೋರಾಗಿ ಕರೆದೆ, ಆಕೆ ಬರಲಿಲ್ಲ, ಕೂಗಿ ಕಿರುಚಾಡುವುದು ನಮ್ಮ ಜಾಯಮನವಲ್ಲವಾದುದರಿಂದ ನಿಧಾನವಾಗಿ ಹಾಸಿಗೆಯಿಂದ ಎದ್ದು ಗೋಡೆಯ ಆಸರೆ ಬಳಸಿ ಮನೆಯೊಳಗೆ ಹೆಜ್ಜೆ ಹಾಕಿದೆ, ಅಡುಗೆ ಮನೆಯತ್ತ ದೃಷ್ಟಿ ಹಾಯಿಸಿದೆ, ಅಲ್ಲೂ ಇಲ್ಲದ ಕಾರಣ, ಮನೆಯ ಹಿಂಭಾಗಕ್ಕೆ ನಡೆದೆ, ಆಕೆ ಅಲ್ಲೂ ಇಲ್ಲಾ!. ನನ್ನ ಸಹನೆಯ ಅಣೆಕಟ್ಟಿಗೆ ಕೋಪ ಪ್ರವಾಹದ ತರಂಗಗಳು ಒಂದೇ ಸಮನೆ ತಾಕುತ್ತಿದ್ದವು. ಎಲ್ಲಿ ಹೋದಳೀಕೆ?
ದೇವರ ಮನೆಯಲ್ಲಿ ಆರತಿ ತಟ್ಟೆಯ ಸದ್ದಾಯ್ತು ಎಂದು ಸೀದಾ ಅಲ್ಲಿಗೆ ಧಾವಿಸಿದೆ, ಆಕೆ ಜೋರಾಗಿ ಬಿಕ್ಕುತ್ತಿದ್ದಳು, ಕಣ್ಣು ಕೆಂಪಾಗಿತ್ತು. "ಏನಾಯ್ತು" ಎಂಬ ನನ್ನ ಪ್ರಶ್ನೆಗೆ ಆಕೆಯ ಒಂದೇ ಉತ್ತರ "ನಿಂಗೆನಾದ್ರು ಆದ್ರೆ ನಂಗೆ ಯಾರಿದ್ದಾರೋ?". ಅದು ನನ್ನ ಪ್ರಶ್ನೆಗೆ ಉತ್ತರವೋ ಇಲ್ಲಾ ಆಕೆಯ ಮರು ಪ್ರಶ್ನೆಯೊ ಅರಿವಾಗಲಿಲ್ಲ ನನಗೆ. ಅದು ನನ್ನ ತಾಯಿ, ಆಕೆಯ ದುಃಖದ ಕಟ್ಟೆಯೊಡೆದಿತ್ತು, "ನಿನ್ನೆದುರು ಅತ್ತರೆ ನೀನು ಬೇಜಾರುಮಾಡ್ಕೊತೀಯ, ಹಾಗಾಗಿ ಒಳಗೆ ಬಂದೆ ಕಣಪ್ಪ", ನಾನು ನಿರುತ್ತರನಾಗಿ ನಿಂತಿದ್ದೆ, ಸಮಾಧಾನಮಾಡುವ ಶಕ್ತಿಯು ನನ್ನಲ್ಲಿ ಉಳಿದಿರಲಿಲ್ಲ. ಸುಮ್ಮನೆ ನಿಂತಲ್ಲಿಯೇ ಕುಸಿದು ಕುಳಿತೆ. ಓಡಿ ಬಂದು ಮತ್ತೆ ಆಸರೆಯಾದಳು, ನನ್ನಲ್ಲಿ ಮತ್ತೆ ಧೈರ್ಯ ತುಂಬಲು ಶುರುವಿಟ್ಟಳು.
ಇದು ನಡೆದು ಸರಿ ಸುಮಾರು ೮-೯ ವರ್ಷ ಕಳೆದಿದೆ, ಈಗಲೂ ಆ ದಿನ ನನ್ನ ಸ್ಮೃತಿ ಪಟಲದಿಂದ ಮಾಸಿಲ್ಲ, ಎಂದೆಂದಿಗೂ ಮಾಸುವುದಿಲ್ಲ. ಪ್ರತಿ ಬಾರಿ ಸೋತಾಗಲು, ಹೀಗೆ ಹಿತ ನುಡಿಗಳಿಂದ ಮೃದು ಮಾತಿನಿಂದ ನನ್ನನ್ನು ತಿದ್ದಿ ನಡೆಸಿದವಳು ಮತ್ತು ನಡೆಸುವವಳು, ಗೆದ್ದಾಗ ಪ್ರೋತ್ಸಾಹಿಸಿ, ಬೆನ್ನು ತಟ್ಟಿ ಮುಂದಿನ ಗುರಿಗೆ ಅಣಿಗೊಳಿಸುವವಳು. ಬದುಕ ಎಲ್ಲ ಮಜಲುಗಳನ್ನು ತುಂಬ ಹತ್ತಿರದಿಂದ ಪರಿಚಯಿಸಿದವಳು ನನ್ನ ಅಮ್ಮ.
ಈ ಬಾರಿ ದೀಪಾವಳಿ ಹಬ್ಬ ಮುಗಿಸಿ, ಬೆಂಗಳೂರಿಗೆ ವಾಪಸು ಹೊರಟು ನಿಂತಾಗ ಮತ್ತೆ ಆಕೆಯ ಕಣ್ಣಾಲಿಗಳಲ್ಲಿ ದುಃಖ ಮಡುಗಟ್ಟಿತ್ತು, ಅದನ್ನು ಒಳಗೊಳಗೇ ನುಂಗಿ ನನ್ನೆಡೆಗೊಂದು ನಗು ಬೀರಿ, "ತಲುಪಿದ ಕೂಡಲೇ ಫೋನ್ ಮಾಡು" ಎಂದು ನುಡಿದು ನೇರ ಮನೆಯೊಳಗೆ ಧಾವಿಸಿದಳು. ನನ್ನ ಬಾಲ್ಯದ ಎಳೆ ಎಳೆಗಳನ್ನೂ ನೆನಪಿನಂಗಳಕ್ಕೆ ತಂದಿಕ್ಕಿ ವಾಸ್ತವ ಕದವಿಕ್ಕಿಕೊಂಡಿತು. ಬಸ್ಸಿನಲ್ಲಿ ಕುಳಿತ ನಾನು ಕಣ್ಣೀರಾಗಿದ್ದೆ ಅಮ್ಮನ ನೆನಪಿನಲ್ಲಿ, ಬಸ್ಸು ಬೆಂಗಳೂರಿನ ಕಡೆಗೆ ಹೊರಟಿತ್ತು, ಅನಿವಾರ್ಯ ಪಯಣ ಮುಂದುವರಿದಿತ್ತು.
ಹೃದಯಾಂತರಾಳದಿಂದ ಉದ್ಗರಿಸಿದೆ ಅಮ್ಮಾ ನಿನಗೆ ನನ್ನ ಸಾಷ್ಟಾಂಗ ನಮನ.....

5 ಕಾಮೆಂಟ್ಗಳು:
ammana nanapu annoda haage kano, idannu omma amma odeedare avara manassige khushi agudu ...Very nice article ....
ಕೃಷ್ಣಾ,
ಬದುಕಿನಲ್ಲಿ ಬಹಳ ಸಾರಿ ಅಂತರಂಗವನ್ನು ನಮ್ಮ ಪ್ರೀತಿ ಪಾತ್ರರ ಎದುರು ಬಿಚ್ಚಿಡುವುದು ತುಂಬಾ ಕಷ್ಟ, ಹೆಚ್ಚಿನ ವಿಚಾರಗಳನ್ನ ಹೇಳೋದಕ್ಕಿಂತ, ಬರೆದಿಡೋದೇ ಸುಲಭ. ತಪ್ಪದೆ ಆಗಾಗ ಬಂದು ಹೋಗುತ್ತಿರು, ನಿನ್ನ ಪ್ರೀತಿಗೆ ನಾನು ಋಣಿ.
After reading this..i felt like missing my mom so much....I would like to show this to my mom....it has inspired me so much...will definitely translate this to telugu and show this to my mom..
Don't worry...i'm not going to use my name for that...will tell that it is your's...
ಪ್ರೀತಿಯ ಉಷಕ್ಕ,
ಅಮ್ಮನ ಪ್ರೀತಿಯೇ ಅಂತದು, ಮಧುರವಾದಂತಹುದು... ನನ್ನ ಲೇಖನ ನಿಮ್ಮ ಅಮ್ಮನ ನೆನಪು ತಂದಿದ್ದರೆ, ಅದನ್ನು ಬರೆದ ಉದ್ದೇಶ ಸಾರ್ಥಕ.
ಅನುವಾದದ ಹಕ್ಕುಗಳನ್ನು ನಿಮಗೆ ಕೊಟ್ಟಿರುತ್ತೇನೆ, ಮೂಲ ಲೇಖನಕ್ಕೆ ಚ್ಯುತಿ ಬಾರದಿದ್ದರೆ ಸಾಕು [:)]. ಇದನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು, ನನ್ನ ಬರಹಗಳೆಡಗಿನ ನಿಮ್ಮ ಪ್ರೀತಿ ಹೀಗೆ ಮುಂದುವರಿಯಲಿ.
ರಾಜೇಶ್,
ಅಮ್ಮನ ನೆನಪುಗಳು ಈಗಲೂ ಕಾಡುತ್ತವೆಯಾ?????? ಅಂತ ಅಮ್ಮನ ಪಡೆಲು ನೀವು ಪುಣ್ಯ ಮಾಡಿದ್ದೀರಿ ರಾಜೇಶ್...
ಕಾಮೆಂಟ್ ಪೋಸ್ಟ್ ಮಾಡಿ