ಶಿಶಿರನಾಗಮನದಿಂದ ಎಲೆಯುದುರಿ ನಿಂತಿದ್ದಕ್ಕೋ?
ವಸಂತನಾಗಮನದಿಂದ ಮೈತುಂಬಿ ಬಂದದ್ದಕ್ಕೋ?
ಕಾರಣವರಿಯೆನು!
ನಿರಾಕಾರಣವಾಗಿ...
ನಿರ್ವಿಕಾರಣವಾಗಿ... ನೀನು ನಿಂತು ತೂಗಿ...
ಇಷ್ಟಿಷ್ಟೇ ಎನುವಷ್ಟು ತಂಪೆಲರ ಸೂಸಿದಂತಿದೆ...
ಆ ತಂಗಾಳಿಯ ರಭಸಕ್ಕೆ ನಾನು ಸಿಲುಕಿ ನಲುಗಿದಂತಿದೆ!
ಮತ್ತೆ ಮತ್ತೆ ನಗುವ ಆಸೆ ಮನದಿ ಚಿಗುರಿದಂತಿದೆ!
ಆದರೇಕೋ ಪಾಪಿ ಮನಸು ಮತ್ತೇ ಸೋತು ಕುಳಿತಿದೆ...
2 ಕಾಮೆಂಟ್‌ಗಳು:
Its very nice. Your Kannada vocabulary is very rich, so have used it wisely.
In 1st para you are not sure of the reason & in 2nd you are guessing. When you really know the reason tell us also.
Keep going like this, One day we have to get a book of Rajesh's Poem Collection.
ಪ್ರೀತಿಯ ಹಿರಿಯ ಸಹೋದ್ಯೋಗಿ ಹಾಗು ನಲ್ಮೆಯ ಸಹೋದರಿ,
ನಿಮ್ಮ ಪ್ರಶಂಸೆ ನನ್ನ ಲೇಖನಿಯ ಜವಾಬ್ದಾರಿಯನ್ನು ಹೆಚ್ಚಿಸಿದೆ, ನಿಮ್ಮಂತಹವರ ಪ್ರೋತ್ಸಾಹ ಹೀಗೆ ಇದ್ದರೆ, ನಿಮ್ಮ ಹಾರೈಕೆ ಖಂಡಿತ ನಿಜವಾಗುತ್ತದೆ. ಅಗಾಗ ಇಲ್ಲಿ ಬಂದು ಹೋಗಿ.
ನಿಮ್ಮ ಅನಿಸಿಕೆ, ಅಭಿಪ್ರಾಯ, ಹಾಗು ವಿಮರ್ಶೆಗಳಿಗೆ ಸದಾ ತುಂಬು ಹೃದಯದ ಸ್ವಾಗತ ಹಾಗು ಧನ್ಯವಾದ.
-ರಾಜೇಶ್ ಮಂಜುನಾಥ್
ಕಾಮೆಂಟ್ ಪೋಸ್ಟ್ ಮಾಡಿ